ಕಲಬುರಗಿ: ಆನ್ಲೈನ್ ಇನ್ವೆಸ್ಟ್ಮೆಂಟ್ ಮೋಸ: ನಗರದಲ್ಲಿ ಬ್ಯಾಂಕ್ ಅಧಿಕಾರಿಗೆ ₹11 ಲಕ್ಷ ಪಂಗನಾಮ
ಕಲಬುರಗಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಅಸಿಸ್ಟೆಂಟ್ ಮ್ಯಾನೇಜರ್ ಒಬ್ಬರು ಆನ್ಲೈನ್ ಇನ್ವೆಸ್ಟ್ಮೆಂಟ್ ವಂಚನೆಗೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಟ್ರೇಡಿಂಗ್ನಲ್ಲಿ ಲಾಭದ ಆಸೆ ತೋರಿಸಿ ನಂಬಿಕೆ ಬರುವಂತೆ ಮಾಡಿ CHCP Sei ಎಂಬ ನಕಲಿ ಆಪ್ ಮೂಲಕ ಹಣ ಹೂಡಿಕೆ ಮಾಡಲು ಪ್ರೇರೇಪಿಸಲಾಯಿತು. ಇವರು ಹಂತ ಹಂತವಾಗಿ ಒಟ್ಟು ₹11 ಲಕ್ಷ ಹಣ ಹೂಡಿಕೆ ಮಾಡಿದ್ದರು. ಆದರೆ ಲಾಭದ ಹಣ ನೀಡದೆ, ವಂಚಕರು ಅವರ ಹಣವನ್ನು ಕಬಳಿಸಿದ್ದಾರೆ ಎಂದು ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66(ಸಿ), 66(ಡಿ), ಹಾಗೂ ಬಿ.ಎನ್.ಎಸ್ ಕಾಯ್ದೆಯ 318(2), 318(4), 319(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.