ಕಲಬುರಗಿ: ನಗರದಲ್ಲಿ 3 ಬೀದಿ ನಾಯಿಗಳಿಂದ 3 ವರ್ಷದ ಮಗುವಿನ ಮೇಲೆ: ಪಾಲಿಕೆ ಆಯುಕ್ತ ಆಸ್ಪತ್ರೆಗೆ ಅವಿನಾಶ ಶಿಂದೆ ಭೇಟಿ
ಕಲಬುರಗಿ ನಗರದ ಖಂಡಾಲಾ ಗೌಂಡ್ ಸಮೀಪ ನಾಯಿಗಳ ಹಾವಳಿ ಮುಂದುವರಿದಿದೆ. ಮಿಲ್ಲತ್ ನಗರದ ನಿವಾಸಿ ವಾಹೀದ್ ಖುರೇಷಿ ಅವರ ಮಗಳು ನಿದಾ ಫಾತಿಮಾ (3) ಅವರನ್ನು ಮೂರು ನಾಯಿಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ. ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆ ತಿಳಿದ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಕುರಿತು ಸೋಮವಾರ 4 ಗಂಟೆಗೆ ಮಾಹಿತಿ ಲಭ್ಯವಾಗಿದೆ.