ಮೊಳಕಾಲ್ಮೂರು:-ಪಟ್ಟಣದ ರಾಷ್ಟೀಯ ಹೆದ್ದಾರಿಯ ಬದಿಯಲ್ಲಿ ಪ್ರತೀ ಬುಧವಾರ ವಾರದ ಸಂತೆ ನಡೆಯುತ್ತಿದ್ದು ವಾಹನ ಸವಾರರಿಗೆ ಹಾಗೂ ಸಂತೆಗೆ ಬರುವ ವ್ಯಾಪಾರಸ್ತರ ಜೀವ ಭಯಕ್ಕೆ ಕಾರಣವಾಗಿದೆ. ತಾಲೂಕು ಆಡಳಿತ ,ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ನಿಗದಿ ಪಡಿಸಲಾಗಿದ್ದ ಸಂತೆ ಮೈದಾನದ ಜಾಗ ಸದ್ಯ ಕೋರ್ಟ್ ವ್ಯಾಜ್ಯದಲ್ಲಿದೆ.ಹಾಗಾಗಿ ಆ ಸ್ಥಳದಲ್ಲಿ ಯಾರು ಕೂಡ ಈಗ ವ್ಯಾಪಾರ ಮಾಡುವಂತಿಲ್ಲ. ಈಗ ಇರುವ ಹೆದ್ದಾರಿ ಅಕ್ಕಪಕ್ಕದ ಸೀಮಿತ ಜಾಗದಲ್ಲಿಯೇ ವಾರದ ಸಂತೆ ನಡೆಯುತ್ತಿದೆ. ಸ್ಥಳದ ಅಭಾವದಿಂದ ವಿವಿಧ ವ್ಯಾಪಾರಿಗಳು ಸುಗಮ ಸಂಚಾರಕ್ಕೆಂದು ವಿಸ್ತರಿಸಿರುವ ರಸ್ತೆಯ ಎರಡು ಬದಿಯಲ್ಲಿಯೂ ಹಣ್ಣು, ತರಕಾರಿ, ಹೂವು, ಪುಟ್ಟಿ, ವಿವಿಧ ಕಬ್ಬಿಣದ ಸಾಮಾನುಗಳು, ಕಿರಾಣಿ ಅಂಗಡಿ ನಡೆಸುತ್ತಿರುವು