ಡಾ.ಚನ್ನಬಸವ ಪಟ್ಟದವರ 136 ನೇ ಜಯಂತೋತ್ಸವದ ಅಂಗವಾಗಿ ಶುಕ್ರವಾರ ಸಂಜೆ 4ಕ್ಕೆ ಬಸವ ಜ್ಯೋತಿ ಪಾದಯಾತ್ರೆಗೆ ಚಾಲನೆಯನ್ನು ನೀಡಲಾಯಿತು. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು ಹಾಗೂ ನಾಡೋಜರು ಆಗಿರುವ ಡಾ. ಬಸವಲಿಂಗಪಟ್ಟದೇವರು ಜ್ಯೋತಿ ಪ್ರಜ್ವಲಿಸುವ ಮೂಲಕ ಚಾಲನೆಯನ್ನು ನೀಡಿದರು. ಈ ವೇಳೆ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು, ಬಾಬು ವಾಲಿ ಶಕುಂತಲಾ ಬೆಲ್ದಾಳೆ ಇದ್ದರು. ಇದೇ ವೇಳೆ ಶಶಿಧರ್ ಕೋಸಂಬೆ ಅವರನ್ನು ಸನ್ಮಾನಿಸಲಾಯಿತು.