ಬೆಂಗಳೂರು ಪೂರ್ವ: ವರ್ತೂರಿನಲ್ಲಿ ರಸ್ತೆಗಾಗಿ ಕಂದಮ್ಮಗಳು ಮಾಡಿದ್ದೇನು? ಡಿಸಿಎಂ ಸರ್ ಈಗಲಾದರೂ ದುರಸ್ತಿ ಭಾಗ್ಯ ಕೊಡಿ!
ಸಪ್ಟೆಂಬರ್ 23 ಸಂಜೆ 6:00 ಗಂಟೆ ಸುಮಾರಿಗೆ ವರ್ತೂರು ಗುಂಜೂರಿನ ಭಾಗದ ನಿವಾಸಿಗಳು ರಸ್ತೆಗಾಗಿ ಪ್ರತಿಭಟನೆಯನ್ನು ಮಾಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ರಸ್ತೆಯ ಅವಸ್ಥೆ ಹದಗೆಟ್ಟು ಹೋಗಿದ್ದು ಎಷ್ಟೇ ಸಲ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರಿ ಅಂತಿಲ್ಲ. ಇದೇ ಕಾರಣಕ್ಕೆ ಚಿಕ್ಕಪುಟ್ಟ ಮಕ್ಕಳು ಶಾಲಾ ಮಕ್ಕಳು ನಿವಾಸಿಗಳ ಜೊತೆ ಕೈಜೋಡಿಸಿ ಪ್ರತಿಭಟನೆಯನ್ನು ಮಾಡಿ ತಮ್ಮ ಮನವಿ ಸಲ್ಲಿಕೆ ಮಾಡಿದ್ದಾರೆ. ಈಗಲಾದರೂ ಸರ್ಕಾರ ಗಮನ ಕೊಡುತ್ತಾ ಕಾದು ನೋಡಬೇಕು