ಹುಬ್ಬಳ್ಳಿ: ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನ ನಿರ್ವಹಣೆಗೆ ವೇದಗಳ ಕಾಲದಿಂದಲೂ ಕ್ರೀಡೆ ರಾಮಬಾಣದಂತೆ ಪರಿಣಾಮಕಾರಿಯಾಗಿದೆ ಎಂದು ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿ ತ್ಯಾಗರಾಜ ತಿಳಿಸಿದ್ದಾರೆ.ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಕ್ರೀಡಾಂಗಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ವಳ್ಳಿ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ನೌಕರರ ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆ.ಎಂ.ಸಿ.ಆರ್.ಐ., ಪ್ರಾಧ್ಯಾಪಕ ಡಾ.ಸೀತಾರಾಮ,ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಅಂತರರಾಷ್ಟ್ರೀಯ ಕ್ರೀಡಾಪಟು ಶಶಿಕಲಾ ನಾಯ್ಡು, ರಾಜ್ಯ ಮಟ್ಟದ ಕ್ರೀಡಾಪಟುಗಳಾದ ಮೋಹನ ಬಡಿಗೇರ ಮತ್ತು ಶಿವಕುಮಾರ ಹಿರೇಮಠ ಸೇರ