ಹೋರಿ ಹಬ್ಬದ ಕಿಂಗ್ ಎಂದೆನಿಸಿಕೊಂಡ ಹೋರಿ ಹಬ್ಬ ಪ್ರಿಯರ ಹರೂರು ಗೂಳಿ ಶುಕ್ರವಾರ ಸಂಜೆ 4 ಗಂಟೆಗೆ ಸೊರಬ ತಾಕೂಕಿನ ಹರೂರು ಗ್ರಾಮದಲ್ಲಿ ನಿಧನ ಹೊಂದಿದೆ. ತಾಲೂಕಿನ ಹರೂರು ಗ್ರಾಮದ ಜಗದೀಶಪ್ಪ ದೊಣ್ಣೆ ಇವರು 19 ವರ್ಷಗಳ ಹಿಂದೆ ಶಿಗ್ಗ ಬಸವಿ ಆಕಳಿನ ಕರುವನ್ನು ಹರಾಜಿನಲ್ಲಿ ತಂದು ಸಾಕಿದರು. ಒಂದು ವರ್ಷದ ಕರುವೆ ಮಿಂಚಿನ ಓಟದ ಮೂಲಕ ಹೋರಿ ಹಬ್ಬದಲ್ಲಿ ಪಾಲ್ಗೊಂಡು ಅಪಾರ ಅಭಿಮಾನಿಗಳನ್ನು ಗಳಿಸಿತು. ಹರೂರು ಗೂಳಿ ಭಾಗವಹಿಸಿದ ಹೋರಿ ಹಬ್ಬ ಗಳಲ್ಲಿ ಬಹುಮಾನಗಳ ಸರಮಾಲೆಯನ್ನ ತಂದು ಯಜಮಾನ ಮತ್ತು ಊರಿನ ಕೀರ್ತಿಯನ್ನು ಹೆಚ್ಚು ಮಾಡಿತು.