ಚಿಂಚೋಳಿ: ನದಿ ನೀರಿನ ಸೆಳೆತಕ್ಕೆ ಸಿಲುಕಿ ಎರಡು ಎತ್ತುಗಳ ಸಾವು, ಹಸು ನಾಪತ್ತೆ: ಚಿಂಚೋಳಿಯ ಕನಕಪುರದಲ್ಲಿ ಘಟನೆ
ಚಿಂಚೋಳಿ ತಾಲ್ಲೂಕಿನ ನಾಗರಾಳ ಜಲಾಶಯದಿಂದ ನದಿಗೆ ಬಿಡಲಾದ ನೀರಿನ ಸೆಳೆತಕ್ಕೆ ಕನಕಪುರ ಗ್ರಾಮದ ಎರಡು ಎತ್ತುಗಳು ಕೊಚ್ಚಿಕೊಂಡು ಹೋಗಿ ಮೃತಪಟ್ಟಿವೆ. ಈ ಅವಘಡ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತ ಜಾನುವಾರುಗಳು ವೀರಶೆಟ್ಟಿ ಉಳ್ಳಾಗಡ್ಡಿ ಅವರಿಗೆ ಸೇರಿದವು. ಮಳೆ ಮತ್ತು ಜಲಾಶಯದ ನೀರಿನಿಂದ ನದಿ ತುಂಬಿ ಹರಿಯುತ್ತಿದ್ದ ವೇಳೆ, ಮೇಯಲು ಹೋದ ಜಾನುವಾರುಗಳು ನೀರು ಕುಡಿಯಲು ಇಳಿದಾಗ ದುರಂತ ಸಂಭವಿಸಿದೆ. ಎರಡು ಎತ್ತುಗಳ ಮೃತದೇಹ ಪತ್ತೆಯಾದರೆ, ಒಂದು ಹಸು ಹುಡುಕಾಟ ಮುಂದುವರಿದಿದೆ. ಗ್ರಾಮ ಆಡಳಿತ ಹಾಗೂ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಂಗಳವಾರ ಆರು ಗಂಟೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ...