ಯುವಕರು ಮಾದಕ ವಸ್ಥುಗಳಿಗೆ ಬಾನಿಸರಾಗುವುದನ್ನು ನಿಲ್ಲಿಸಿ ನಶೆಮುಕ್ತ ಜಿಲ್ಲೆ ಮಾಡಲು ಮುಂದಾಗಬೇಕು ; ಸೈಯದ್ ಅಜ್ಮದ್ ಅಪ್ರೀನ್ ಬೇರೆ ರಾಜ್ಯಗಳಿಂದ ಬರುವವರಿಂದ ನಮ್ಮಜಿಲ್ಲೆಯಲ್ಲಿ ಡ್ರಗ್ಸ್ ಸೇವನೆ ಹೆಚ್ಚಳವಾಗಿದ್ದು ಯುವಕರು ಹಾಳಾಗುವುದನ್ನು ಕಡಿವಾಣಹಾಕಿ ನಶೆಮುಕ್ತ ಜಿಲ್ಲೆಯನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸೋಮವಾರ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಸೈಯದ್ ಅಜ್ಮದ್ ಅಪ್ರೀನ್ ತಿಳಿಸಿದರು. ಸೋಮವಾರ ಶ್ರೀನಿವಾಸಪುರ ಪಟ್ಟಣದ ಕಟ್ಟೆಕೆಳಗಿನ ಪಾಳ್ಯ, ಅಂಬೇಡ್ಕರ್ ಪಾಳ್ಯ, ಬಂಬೂಬಜಾರ್, ಇಂದಿರಾನಗರ್ ಹಾಗು ಕಸಬಾ ವ್ಯಾಪ್ತಿಯ ಶಿವಪುರ, ಕಲ್ಲೂರು ಕಾಲೋನಿ, ಮಾಸ್ತೇನಹಳ್ಳಿ, ತೆರ್ನಹಳ್ಳಿ ಮುಂತಾದ ಗ್ರಾಮಗಳಲ್ಲಿ ಗಾಂಜಾ, ತಂಬಾಕು, ಸೆಲ್ಯೂಷನ್,