ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢರ ಮಠದಲ್ಲಿ ಕಾರ್ತಿಕ ಮಾಸದ ನಿಮಿತ್ತವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮವು ಗುರುವಾರ ಸಂಜೆ ಸುಮಾರು ೭ ಗಂಟೆಗೆ ಜರುಗಿತು. ನಗರದ ವಿವಿಧ ಪ್ರದೇಶ ಹಾಗೂ ವಿವಿಧ ಹಳ್ಳಿಗಳಿಂದ ಆಗಮಿಸಿದ ಭಕ್ತಾದಿಗಳು ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹಾಗೂ ಶ್ರೀ ಗುರುನಾಥರೂಢ ಸ್ವಾಮೀಜಿಗಳ ದರ್ಶನ ಪಡೆದುಕೊಂಡರು.