ಮಾಲೂರು: ಮನೆ ಕಳ್ಳತನ ಪ್ರಕರಣ ಆರೋಪಿ ಬಂಧನ ಹಾಗೂ 21 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿಕೊಂಡ ಮಾಲೂರು ಪೊಲೀಸರು
Malur, Kolar | Nov 19, 2025 ಮನೆ ಕಳ್ಳತನ ಪ್ರಕರಣ ಆರೋಪಿ ಬಂಧನ ಹಾಗೂ 21 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿಕೊಂಡ ಮಾಲೂರು ಪೊಲೀಸರು ಮಾಲೂರು ಪೊಲೀಸ್ ಠಾಣಾ ಸರದನಲ್ಲಿ ಸಾರ್ವಜನಿಕರ ಗಮನ ಸೆಳೆದು ಹಣದೋಚುತ್ತಿದ್ದ ಪ್ರಕರಣಗಳು ಸೇರಿದಂತೆ ಒಟ್ಟು 8 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಉಮಾಶಂಕರ್ ನನ್ನು ಬಂಧಿಸಿ ಆತನಿಂದ ಸುಮಾರು 170 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಲೂರು ಪೊಲೀಸರು ಬುಧವಾರ ಮಧ್ಯಾನ 1:00 ಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ