ಯಲ್ಲಾಪುರ: ನವರಾತ್ರಿ ನಿಮಿತ್ತ ಗ್ರಾಮದೇವಿದೇವಾಲಯದಲ್ಲಿ ಅನ್ನ ಸಂತರ್ಪಣೆ, ಶಾಸಕ ಹೆಬ್ಬಾರ್ ರಿಂದ ವಿಶೇಷ ಪೂಜೆ,
ಯಲ್ಲಾಪುರ: ನವರಾತ್ರಿ ಅಂಗವಾಗಿ ಪಟ್ಟಣದ ಗ್ರಾಮದೇವಿ ದೇವಾಲಯ, ಚೌಡೇಶ್ವರಿ ದೇವಾಲಯ ಹಾಗೂ ಶಾರದಾಂಬಾ ದೇವಾಲಯಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ವಿಶೇಷ ಘಟಜೆ ಸಲ್ಲಿಸಿ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ವನಜಾಕ್ಷಿ ಶಿವರಾಮ ಹೆಬ್ಬಾರ್ ಅವರು ಜೊತೆಗಿದ್ದರು. ನವರಾತ್ರಿ ಶುಕ್ರವಾರ ದಂದು ಪಟ್ಟಣದ ಗ್ರಾಮದೇವಿ ದೇವಸ್ಥಾನಕ್ಕೆ ಅಪಾರ ಸಂಖ್ಯೆ ಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಅನ್ನ ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು.ಶ್ರೀ ದೇವಿಯರಿಗೆ ಬೆಳ್ಳಿಯ ಪ್ರಭಾವಳಿ, ಚಿನ್ನದ ಆಭರಣ, ಹೂವು ಗಳಿಂದ ಅಲಂಕಾರ ಮಾಡಲಾಗಿತ್ತು.