ಯಲ್ಲಾಪುರ: ಕಿರವತ್ತಿಯ ಕರ್ನಾಟಕ ಪಬ್ಲಿಕಸ್ಕೂಲನಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ಸತೀಶ ಯಲ್ಲಾಪುರ ರವರಿಗೆ ಬೀಳ್ಕೊಡುಗೆ
ಯಲ್ಲಾಪುರ: ವಿವಿಧ ಪ್ರೌಢಶಾಲೆಗಳಲ್ಲಿ ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕಿರವತ್ತಿಯಕರ್ನಾಟಕ ಪಬ್ಲಿಕ ಸ್ಕೂಲ್ ನಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ಸತೀಶ ಯಲ್ಲಾಪುರ ಅವರನ್ನು ಪಬ್ಲಿಕ್ ಸ್ಕೂಲ್ ಕಿರವತ್ತಿಯ ಆಶ್ರಯದಲ್ಲಿ ಶುಕ್ರವಾರ ಅಭಿನಂದಿಸಿ ಬೀಳ್ಕೊಡಲಾಯಿತು.ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಿಕ್ಷಕ ಸಮೂಹ,ವಿದ್ಯಾರ್ಥಿಗಳು,ವಿವಿಧ ಸಂಘ ಸಂಸ್ಥೆಗಳವರು,ಪ್ರಮುಖರು ನಿವೃತ್ತಿಗೊಂಡ ಕಲಾ ಶಿಕ್ಷಕ ಸತೀಶ ಯಲ್ಲಾಪುರ ರವರನ್ನು ಅಭಿನಂದಿಸಿದರು.ಅಭಿನಂದನೆ ಸ್ವೀಕರಿಸಿದ ಸತೀಶ ಯಲ್ಲಾಪುರ ಮಾತನಾಡಿ,ಕಷ್ಟಗಳು ಮತ್ತು ಪ್ರಯತ್ನ ಮನುಷ್ಯನ ಯಶಸ್ಸಿಗೆ ಕಾರಣವಾಗುತ್ತದೆ.ಮಕ್ಕಳು ಕಷ್ಟಪಟ್ಟು ಓದಬೇಕು.ಕಷ್ಟದ ಅರಿವೂ ಆಗಬೇಕು ಆಗ ಸವಾಲುಗಳನ್ನು ಎದುರಿಸುತ್ತೀರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.