ಹುಬ್ಬಳ್ಳಿ ನಗರ: ನಗರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬಟ್ಟೆ ಅಂಗಡಿ
ಹುಬ್ಬಳ್ಳಿ: ಶಾರ್ಟ್  ಸರ್ಕ್ಯೂಟ್ ದಿಂದಾಗಿ ಬಟ್ಟೆ ಅಂಗಡಿಯೊಂದು ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಷಾ ಬಜಾರ್'ದಲ್ಲಿ ಬುಧವಾರ ತಡರಾತ್ರಿ ನಡೆದಿದೆ.  ಹಳೇಹುಬ್ಬಳ್ಳಿ ನಿವಾಸಿ ಸದ್ದಾಂ ಮಡಕಿ ಎಂಬಾತರ ಅಲಿನಾ ಸೇಲ್ ಎಂಬ ಬಟ್ಟೆ ಅಂಗಡಿಗೆ ಬೆಂಕಿ ಹೊತ್ತಿದ್ದು ಅಂದಾಜು 22 ಲಕ್ಷ ಮೌಲ್ಯದ ಬಟ್ಟೆ, ಸ್ಟೇಷನರಿ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ.