ಶಿರಸಿ: ಹುಲೇಕಲ್ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ
ಶಿರಸಿ: ತಾಲೂಕಿನ ಹುಲೇಕಲ್ ಗ್ರಾಮ ದ ಶ್ರೀ ಚೌಡೇಶ್ವರಿ ದೇವಸ್ಥಾದಲ್ಲಿ ಶ್ರೀ ದೇವರ ಮೂರ್ತಿಯ ಮೇಲಿದ್ದ ಸುಮಾರು 2.31.400/-ರೂ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ನಗದು ಹಣ 80,000/-ರೂಗಳನ್ನು ಕಳ್ಳತನ ಮಾಡಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾಲಕುಮಾರ ವಾಸು ಕೆ ಯಾನೆ ಬಾಲರಾಜ ಸ್ವಾಮಿ ಹಾಗು ಮಹಮ್ಮದ್ ಅಲಿ ಅಲಿಕಾಕಾ ಯಾನೆ ಜಯರಾಜ ಎಂಬಿಬ್ಬರು ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ.