ವೆಲ್ಡಿಂಗ್ ಮಾಡುವ ವೇಳೆ ಕಿಡಿ ಬಿದ್ದು ಕಬ್ಬು ತುಂಬಿದ ಟ್ರ್ಯಾಕ್ಟರ್ ಗೆ ಬೆಂಕಿ ಹೊತ್ತಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀಪದ ಕಸಬಾಜಂಬಗಿ ಕ್ರಾಸ್ ಬಳಿ ನಡೆದಿದೆ. ಟ್ರ್ಯಾಕ್ಟರ್ ಟ್ರೇಲರ್ ಗೆ ಬೆಂಕಿ ಬೀಳುತ್ತಿದ್ದಂತೆ ಎಚ್ಚೆತ್ತ ಸಾರ್ವಜನಿಕರು ಅವಸರದಲ್ಲಿ ಬೆಂಕಿ ನಂದಿಸಿ ಅನಾಹುತ ತಡೆಗಟ್ಟಿದ್ದಾರೆ. ಟ್ರ್ಯಾಕ್ಟರ್ ಚಾಲಕ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನ್ನು ವೆಂಲ್ಡಿಂಗ್ ಅಂಗಡಿ ಪಕ್ಕ ನಿಲ್ಲಿಸಿದ್ದಾನೆ. ಈ ವೇಳೆ ಅಂಗಡಿಯವರು ಕಬ್ಬಿಣಕ್ಕೆ ವೆಲ್ಡಿಂಗ್ ಮಾಡುತ್ತಿದ್ದರು ಆಗ ಹಾರಿದ ಕಿಡಿಯಿಂದ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿದೆ. ಮುಂಜಾಗೃತೆಯಿಂದ ಟ್ರ್ಯಾಕ್ಟರ್ ಇಂಜಿನ್ ನ್ನು ಟ್ರೇಲರಿಂದ ಬೇರ್ಪಡಿಸಿ ಬೆಂಕಿ ನಂದಿಸಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.