ಶಿವಮೊಗ್ಗ: ನಗರದ ಅಡಿಕೆ ವ್ಯಾಪಾರದ ಗೊದಾಮುಗಳ ಮೇಲೆ ಮಲೆನಾಡು ವಿಭಾಗೀಯ ತೆರಿಗೆ ಜಾಗೃತಿ ದಳದ ಅಧಿಕಾರಿಗಳ ದಿಢೀರ್ ದಾಳಿ, ಪರಿಶೀಲನೆ
ಮಲೆನಾಡು ವಿಭಾಗೀಯ ತೆರಿಗೆ ಜಾಗೃತಿ ದಳದ ಅಧಿಕಾರಿಗಳು ಅಡಿಕೆ ವ್ಯಾಪಾರ ಮಳಿಗೆಗಳು, ಗೋದಾಮುಗಳ ಮೇಲೆ ದಿಢೀರ್ ದಾಳಿ ನಡೆಸಿ, ದಾಸ್ತಾರು ಪರಿಶೀಲಿಸಿದರು. 40 ಅಧಿಕಾರಿಗಳು ದಿಢೀರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ವಿಭಾಗ ವ್ಯಾಪ್ತಿಯ ಜಾರಿ ಮತ್ತು ಜಾಗೃತಿ ದಳ, ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಅಧಿಕಾರಿಗಳು ಗೋದಾಮುಗಳಲ್ಲಿ ತಪಾಸಣೆ ನಡೆಸಿದರು. ಅಕ್ರಮ ವಹಿವಾಟು ದಾಸ್ತಾನು ಪತ್ತೆ ಹಚ್ಚಿ ಸಮಾನ ಮೊತ್ತದಷ್ಟು ದಂಡ ವಿಧಿಸಲಾಗಿದೆ. ಮಲೆನಾಡು ವಿಭಾಗ ವ್ಯಾಪ್ತಿಯ ಎಲ್ಲ ಅಡಿಕೆ ವರ್ತಕರ ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.