ಶ್ರೀನಿವಾಸಪುರ: ಏಳು ದಿನದ ಕಂದಮ್ಮನನ್ನು ಬಿಟ್ಟು ದಂಪತಿ ಆತ್ಮಹತ್ಯೆ : ಉಪ್ಪರಪಲ್ಲಿಯಲ್ಲಿ ಘಟನೆ
ಏಳು ದಿನದ ಕಂದಮ್ಮನನ್ನು ಬಿಟ್ಟು ದಂಪತಿ ಆತ್ಮಹತ್ಯೆ : ಉಪ್ಪರಪಲ್ಲಿ ಯಲ್ಲಿ ಘಟನೆ ಕೇವಲ ಏಳು ದಿನಗಳ ಕಂದಮ್ಮನನ್ನು ಬಿಟ್ಟು, ಅಸ್ಸಾಂ ಮೂಲದ ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ಕಲಕುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ನಡೆದಿದೆ. ಮಗುವಿನ ಜನನದ ಸಂಭ್ರಮ ಮಾಸುವ ಮುನ್ನವೇ ಕುಟುಂಬದಲ್ಲಿ ನಡೆದ ಈ ದುರಂತ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ತಾಲ್ಲೂಕಿನ ಉಪ್ಪರಪಲ್ಲಿ ಗ್ರಾಮದ ಶ್ರೀನಿವಾಸರೆಡ್ಡಿ ಎಂಬುವವರ ಕೋಳಿ ಫಾರಂನಲ್ಲಿ ಕೆಲಸಕ್ಕಾಗಿ ಬಂದಿದ್ದ, ಅಸ್ಸಾಂ ಮೂಲದ ಫರಿಜಾ (22) ಮತ್ತು ರೆಹಮಾನ್ (28) ದಂಪತಿಗಳು ಕಳೆದ ಸುಮಾರು ಹದಿನೈದು ದಿನಗಳಿಂದ ಫಾರಂ ಸಮೀಪ ವಾಸವಾಗಿದ್ದರು. ಸರಿಯಾಗಿ ಏಳು ದಿನಗ