ನಂಜನಗೂಡು: ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಮಂಗಳಮುಖಿಯರು ಭಾಗವಹಿಸಿ; ಪಟ್ಟಣದಲ್ಲಿ ಸಿಡಿಪಿಒ ಕೆ.ಎಸ್ ಭವ್ಯಶ್ರೀ
ಈಗ ರಾಜ್ಯದೆಲ್ಲೆಡೆ ಆರಂಭವಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಮಂಗಳಮುಖಿಯರು ಪಾಲ್ಗೊಳ್ಳುವಂತೆ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಕೆ.ಎಸ್ ಭವ್ಯ ಶ್ರೀ ಮನವಿ ಮಾಡಿದ್ದಾರೆ. ನಂಜನಗೂಡು ತಾಲ್ಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಲಿಂಗತ್ವ ಅಲ್ಪಸಂಖ್ಯಾತರ ಮಂಗಳಮುಖಿಯರ ಸಮೀಕ್ಷೆಯನ್ನು ಮಾಡಲಾಗುತ್ತಿದೆ. ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯ ಕೊಠಡಿ ಸಂಖ್ಯೆ 50 ರಲ್ಲಿ ಸಮೀಕ್ಷೆಯನ್ನು ಮಾಡಲಾಗುತ್ತಿದೆ.