ಬೀದರ್: ಸಂಸದ ಅನಂತಕುಮಾರ್ ಹೆಗಡೆಗೆ ಜನರೇ ಪಾಠ ಕಲಿಸುತ್ತಾರೆ: ನಗರದಲ್ಲಿ ಸಚಿವ ಈಶ್ವರ್ ಖಂಡ್ರೆ
Bidar, Bidar | Mar 10, 2024 ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದು, ಅವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ನಗರದಲ್ಲಿ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೆಗಡೆ ಅವರು ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಒಡೆದಾಳುವ ನೀತಿ ಅನುಸರಿಸಬೇಕು ಅಂತಾರೆ. ಭಾವನಾತ್ಮಕ ವಿಷಯಗಳನ್ನ ಕೆಣಕುತ್ತಾ ಇದ್ದಾರೆ. ಸಮಾಜವಿರೋಧಿ ಹೇಳಿಕೆಗಳನ್ನು ಮೊದಲಿಂದಲೂ ಕೊಡುತ್ತಾ ಬಂದಿದ್ದಾರೆ. ಅವರಿಗೆ ಇನ್ನಾದ್ರು ಒಳ್ಳೆಯ ಬುದ್ಧಿ ಬರಲಿ ಎಂದರು.