ಕಲಬುರಗಿ : ಬೈಕ್ಗೆ ಹಿಂಬದಿಯಿಂದ ಎನ್ಈಕೆಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೆ ದುರ್ಮರಣಕ್ಕಿಡಾದ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ರಾಸಣಗಿ ಗ್ರಾಮದ ಬಳಿ ಡಿಸೆಂಬರ್ 4 ರಂದು ಮಧ್ಯಾನ 3 ಗಂಟೆಗೆ ನಡೆದಿದೆ.. 20 ವರ್ಷದ ಭೂಮಿಕಾ ಹಂಗರಗಾ ಮೃತ ದುದೈವಿಯಾಗಿದ್ದಾಳೆ.. ಸಂಬಂಧಿ ಯುವಕನೊಂದಿಗೆ ಬೈಕ್ ಮೇಲೆ ಜೇವರ್ಗಿ ಪಟ್ಟಣದಿಂದ ಸ್ವ ಗ್ರಾಮಕ್ಕೆ ಹೋಗ್ತಿರೋವಾಗ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ಭೂಮಿಕಾ ಸ್ಥಳದಲ್ಲೆ ಮೃತಪಟ್ಟರೆ, ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ