ಬೆಂಗಳೂರು ದಕ್ಷಿಣ: ದೊಡ್ಡಬಳ್ಳಾಪುರ: ಅವಾಚ್ಯ ನಿಂದನೆ ಪ್ರಶ್ನಿಸಿದ್ದಕ್ಕೆ ಹಲ್ಲೆಗೊಳಗಾದವ ಮೂರು ದಿನಗಳ ಬಳಿಕ ಸಾವು, ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ
ಅವ್ಯಾಚ ಪದಗಳಿಂದ ನಿಂದಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆಗೈದು ಸಾವಿಗೆ ಕಾರಣವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಹಾರದ ಬೇಗುಸರಾಯ್ ಮೂಲದ ಕಾರ್ಮಿಕ ಭೀಮ್ ಕುಮಾರ್ ಮೃತ ದುರ್ದೈವಿ. ಪ್ರಕರಣದ ಕುರಿತು ಸೆಪ್ಟೆಂಬರ್ 14ರಂದು ಮಧ್ಯಾಹ್ನ 12 ಗಂಟೆಗೆ ಮಾಹಿತಿ ನೀಡಿದ ಪುಟ್ಟೇನಹಳ್ಳಿ ಪೊಲೀಸರು,"ಮೃತನ ಸ್ನೇಹಿತರ ದೂರಿನನ್ವಯ ಪ್ರಕರಣ ದಾಖಲಾಗಿದ್ದು,ಆರೋಪಿ ಸಲ್ಮಾನ್ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಅರೆಕೆರೆ ಬಳಿ ಸೆಪ್ಟೆಂಬರ್ 7ರಂದು ಭೀಮ್ ಕುಮಾರ್ ಮತ್ತು ಆತನ ಸ್ನೇಹಿತರು ಪಾನಿಪುರಿ ತಿನ್ನುತ್ತಾ ನಿಂತಿದ್ದಾಗ ಸಲ್ಮಾನ್ ಎಂಬಾತ ಅವಾಚ್ಯವಾಗಿ ನಿಂದಿಸಿದ್ದ. ಇದನ್ನ ಭೀಮ್ ಕುಮಾರ್ ಪ್ರಶ್ನಿಸಿದಾಗ ಬಲವಾಗಿ ಭೀಮ್ ಕುಮಾರ್ನ ಕುತ್ತಿಗೆಗೆ ಮುಷ್ಠಿಯಿಂದ ಪಂಚ್ ಮಾಡಿದ್ದ ಎಂದರು