ಕಲಬುರಗಿ: ನಗರದಲ್ಲಿ ಟ್ರಾಫೀಕ್ ಪಿಎಸ್ಐ ಭಾರತಿಬಾಯಿ ಮಾನವಿಯತೆ: ಬಾಲಕಿಯ ರಕ್ಷಣೆ, ಪೋಷಕರಿಗೆ ಹಸ್ತಾಂತರ
ಟ್ರಾಫಿಕ್ ಪೊಲೀಸರು ಅಂದರೆ ಕೇವಲ ವಾಹನಗಳಿಗೆ ದಂಡ ವಿಧಿಸುವುದು, ವಾಹನ ದಟ್ಟಣೆಗಳನ್ನು ನಿಯಂತ್ರಿಸುವುದು, ಸಂಚಾರಿ ನಿಯಮ ಉಲ್ಲಂಘನೆಗಳನ್ನು ತಡೆಯುವುದಷ್ಟೇ ಅಲ್ಲ. ಇದಕ್ಕಿಂತಲೂ ಮಿಗಿಲಾಗಿ, ಅವರಲ್ಲಿಯೂ ಮಾನವೀಯತೆ ಕೂಡಾ ಇರುತ್ತದೆ ಎಂಬುದನ್ನು ಕಲಬುರಗಿ ಸಂಚಾರಿ ಪೊಲೀಸರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ನಗರದ ಜೆಬಿ ಕ್ರಾಸ್ ಹತ್ತಿರ ರೋಶನಿ ಎಂಬ ಬಾಲಕಿ ತನ್ನ ಪಾಲಕರನ್ನು ಕಳೆದುಕೊಂಡು ಅಳುತ್ತಿದ್ದಾಗ, ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಭಾರತಿಬಾಯಿ ಮಗುವಿಗೆ ಆರೈಕೆ ನೀಡಿ, ಬಾಲಕಿಯ ಪಾಲಕರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಅವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅದರಂತೆ ನಗರದ ಎಸ್.ಬಿ. ಪೆಟ್ರೋಲ್ ಪಂಪ್ ಹತ್ತಿರ ಸಂಚಾರಕ್ಕೆ ಅಡ್ಡಿಯಾಗಿದ್ದ ಕಲ್ಲನ್ನು ಸಂಚಾರಿ