ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ
ಬೇಸಿಗೆ ಹಂಗಾಮಿಗೆ ನೀರು ಪೂರೈಸಲು ನಗರದಲ್ಲಿ ತುಂಗಭದ್ರ ರೈತ ಸಂಘ ಆಗ್ರಹ
ಬರುವ ಬೇಸಿಗೆ ಬೆಳೆಗೂ ತುಂಗಭದ್ರ ಜಲಾಶಯದಿಂದ ನೀರು ಬಿಡಬೇಕು ಎಂದು ತುಂಗಭದ ರೈತ ಸಂಘ ಸರಕಾರವನ್ನು ಒತ್ತಾಯಿಸಿದೆ ನಗರದಲ್ಲಿ ಶನಿವಾರ ಸಂಜೆ 6ಗಂಟೆ ಮಾತನಾಜಿದ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಎರಡನೇ ಬೆಳೆಗೆ ನೀರು ಮತ್ತು ಮುಂಬರುವ ದಿನಗಳಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು ಕುರಿತು ಚರ್ಚಿಸಲು ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕುಎಂದು ಆಗ್ರಹಿಸಿದರು. ಬೇಸಿಗೆ ಬೆಳೆಗೆ ನೀರು ಬಿಡುವ ಕುರಿತು ಮತ್ತೊಮ್ಮೆ ಸಭೆ ಕರೆದು ನಿರ್ಧರಿಸೋಣ ಎಂದು ಈ ಹಿಂದೆ ಸರಕಾರ ಹೇಳಿತ್ತು. ಆದರೆ ಈ ವರೆಗೆ ಕರೆದಿಲ್ಲ. ಹೀಗಾಗಿ ಕೂಡಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೇಸಿಗೆ ಬೆಳೆಗೆ ನೀರಿನ ಕುರಿತು ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರಾವರಿ ತಜ್ಞರೊ