ಶಿವಮೊಗ್ಗ: ಭದ್ರಾ ಜಲಾಶಯದ ತಾಂತ್ರಿಕ ದೋಷ ಸರಿಪಡಿಸಿದ ಸಿಬ್ಬಂದಿ
ಶಿವಮೊಗ್ಗದ ಭದ್ರಾ ಜಲಾಶಯದ ತಳಮಟ್ಟದ ಗೇಟ್ ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಸರಿಪಡಿಸಲಾಗಿದೆ.ಗೇಟ್ಗಳನ್ನ ಬಂದ್ ಮಾಡಲಾಗಿದ್ದು, ನೀರು ಪೋಲು ತಡೆಯಲಾಗಿದೆ. ಇದರಿಂದ ಅಚ್ಚುಕಟ್ಟು ಭಾಗದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಸುಮಾರು 5 ಇಂಚಿನಷ್ಟು ತೆಗೆದುಕೊಂಡಿದ್ದವು ಇದರಿಂದ ಸುಮಾರು 1500 ರಿಂದ 2000 ಕ್ಯೂ ಸೆಕ್ಸ್ ನೀರು ಹೊರಗೆ ಹರಿದು ಹೋಗುತ್ತಿತ್ತು ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಗೇಟ್ ಬಂದ್ ಮಾಡುವ ಪ್ರಕ್ರಿಯೆ ಆರಂಭವಾಗಿತ್ತು ವೇದಮೂರ್ತಿ ನೌಕರರ ತಂಡ 48 ಗಂಟೆಗಳ ನಿರಂತರ ಪರಿಶ್ರಮ ವಹಿಸಿ ತಾಂತ್ರಿಕ ದೋಷ ಸರಿಪಡಿಸುವುದಾಗಿ ಪ್ರಕಟಣೆ ಮೂಲಕ ಭಾನುವಾರ ತಿಳಿಸಲಾಗಿದೆ