ಹಾವೇರಿ: ಹಾವೇರಿಯ ಸುಭಾಸವೃತ್ತದ ಗಣೇಶ ನಿಮಜ್ಜನ ಕಾರ್ಯಕ್ರಮದಲ್ಲಿ ಡಿಜೆ ಸಾಂಗಗೆ ಕುಣಿದು ಕುಪ್ಪಳಿಸಿದ ಯುವಪಡೆ
Haveri, Haveri | Sep 16, 2025 ಹಾವೇರಿಯ ಸುಭಾಸವೃತ್ತದಲ್ಲಿ ಕಳೆದ ೪೫ ವರ್ಷದಿಂದ ಗಣೇಶ್ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಪ್ರಸ್ತುತ ವರ್ಷ ಶಿವಾಜಿ ಮಹಾರಾಜ ರೂಪದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ೨೧ ನೇ ದಿನವಾದ ಮಂಗಳವಾರ ಗಣೇಶ ನಿಮಜ್ಜನ ಕಾರ್ಯಕ್ರಮ ನಡೆಸಲಾಯಿತು. ನಿಮಜ್ಜನ ಅಂಗವಾಗಿ ಶೋಭಾಯಾತ್ರೆ ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು.