ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಶ್ರೀ ಕೋಟಿ ಸೀತಾ ರಾಮಾಂಜನೇಯ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶಕ್ತಿ ದೇವತೆಗಳ ಸಮಾಗಮ ಶುಕ್ರವಾರ ನಡೆಯಿತು. ಶಿವಮೊಗ್ಗ ನಗರ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮದೇವತೆಗಳನ್ನ ಕರೆತಂದು ಮಡಿಲು ತುಂಬಿಸುವ ಶಾಸ್ತ್ರವನ್ನು ಮಾಡಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.