ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮ ಪಡುತ್ತಿದ್ದೇನೆ ತಾಳಕುಂಟೆ ಗ್ರಾಮದಲ್ಲಿ ಶಾಸಕ ಕೆ ವೈ ನಂಜೇಗೌಡ ಮಾಲೂರು ತಾಲೂಕಿನ ಲಕ್ಕೂರು ಹೊಬಳಿಯ ಜಯಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಳಕುಂಟೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಕರಗದಮ್ಮ ದೇವಿ ದೇವಾಲಯದ ಗುದ್ದಲಿ ಪೂಜೆ ಹಾಗೂ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಸ್ಥಳೀಯನಾದ ನನಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿದ ಕ್ಷೇತ್ರದ ಜನರಿಗೆ ಅವರ ಅಭಿವೃದ್ಧಿಗಾಗಿ ಪ್ರತಿಕ್ಷಣ ಶ್ರಮಿಸುತ್ತೇನೆ ಎಂದು ಶಾಸಕ ಕೆ ವಿ ನಂಜೇಗೌಡ ತಿಳಿಸಿದ್ದಾರೆ