ಚಾಮರಾಜನಗರ ತಾಲೂಕಿನ ನಂಜೇದೇವನಪುರದಲ್ಲಿ 5 ಹುಲಿ ಕಾಣಿಸಿಕೊಂಡ ಘಟನೆ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋಣ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರ್ಯಾಚರಣೆ ಹಿನ್ನಲೆ ಮಂಗಳವಾರ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, ಬಂಡೀಪುರ ಪಶು ವೈದ್ಯ ಡಾ.ವಾಸಿಂ ಮಿರ್ಜಾ ಹುಲಿ ಬೀಡುಬಿಟ್ಟಿದ್ದ ಕ್ವಾರಿ ಹಾಗೂ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿ ಸೆರೆ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಈಶ್ವರ್ ಮತ್ತು ಲಕ್ಣ್ಮಣ್ ಆನೆಗಳನ್ನು ಕರೆಯಿಸಿಕೊಂಡಿದ್ದು 100 ಕ್ಕೂ ಅಧಿಕ ಸಿಬ್ಬಂದಿಗಳು, ಪಶು ವೈದ್ಯರು ಇದರಲ್ಲಿ ಭಾಗಿಯಾಗಿದ್ದಾರೆ. 5 ಹುಲಿ ಕಾಣಿಸಿಕೊಂಡ ಪ್ರಕರಣ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ವಿಸಿ ಮೂಲಕ ಅರಣ್ಯ ಸಚಿವರು ಸಭೆ ನಡೆಸಿದ್ದಾರೆ.