ಹುಬ್ಬಳ್ಳಿ ನಗರ: ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ನಗರದಲ್ಲಿ ಮೇಯರ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇಂದು ಮಹಾಪೌರರ ಕಛೇರಿಯಲ್ಲಿ ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರ ನೇತೃತ್ವದಲ್ಲಿ ಚರ್ಚಿಸಲಾಯಿತು.ಈಗಾಗಲೇ ಪ್ರಚಾರ ಸಮಿತಿ ,ಮೆರವಣಿಗೆ ಸಮಿತಿ , ಸಾಂಸ್ಕೃತಿಕ ವೇದಿಕೆ ಸಮಿತಿ , ಧೀಮಂತ ಸನ್ಮಾನ ಸಮಿತಿ ಅಲ್ಪೋಪಹಾರ ಸಮಿತಿಗಳನ್ನು ರಚಿಸಲಾಗಿದ್ದು ಸಮಿತಿಗಳ ಅಧ್ಯಕ್ಷರು , ಪಾಲಿಕೆ ಸದಸ್ಯರು ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ಪೂರ್ವಬಾವಿ ಸಭೆ ನಡೆಸಲಾಯಿತು.