ಕಲಬುರಗಿ : ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ಅಕ್ರಮ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆ.ಸಿ ವೇಣುಗೋಪಾಲರ ಒಂದೇ ಒಂದು ಟ್ವೀಟ್ಗೆ ಸರ್ಕಾರ ಕೇರಳದವರಿಗೆ ಮನೆ ಕಟ್ಟಿಕೊಡ್ತಿವಿ ಅಂತಾ ಉಲ್ಟಾ ಹೊಡೆದಿದೆಯೆಂದು ರಾಜ್ಯ ಸರ್ಕಾರದ ವಿರುದ್ಧ ಎಮ್ಎಲ್ಸಿ ಎನ್ ರವಿಕುಮಾರ್ ಕಿಡಿಕಾರಿದ್ದಾರೆ.. ಡಿಸೆಂಬರ್ 29 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಉತ್ತರ ಕರ್ನಾಟಕ ಮಂದಿ ಕಣ್ಣಿರು ಸುರಿಸುತ್ತಿರೋದು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ವ ಅಂತಾ ರವಿಕುಮಾರ್ ಪ್ರಶ್ನಿಸಿದ್ದಾರೆ