ಕಲಬುರಗಿ : ಕೋಲಿ ಕಬ್ಬಲಿಗ ಸಮಾಜವನ್ನ ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ ಕಲಬುರಗಿ ನಗರದಲ್ಲಿ ಕೋಲಿ ಕಬ್ಬಲಿಗ ಸಮಾಜ ಬೃಹತ್ ಹೋರಾಟ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.. ಡಿಸೆಂಬರ್ 29 ರಂದು ಮಧ್ಯಾನ 1 ಗಂಟೆಗೆ ನಗರದ ಜಗತ್ ವೃತ್ತದಿಂದ ಬೃಹತ್ ಪ್ರತಿಭಟನ ಮೆರವಣಿಗೆ ಮೂಲಕ ಡಿಸಿ ಕಚೇರಿವರೆಗೆ ಆಗಮಿಸಿ, ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡಿದರು.. ಇನ್ನೂ ಚುನಾವಣಾ ಸಂದರ್ಭದಲ್ಲಿ ಕೋಲಿ ಕಬ್ಬಲಿಗ ಸಮಾಜವನ್ನ ಎಸ್ಟಿಗೆ ಸೇರಿಸೋದಾಗಿ ಭರವಸೆ ನೀಡಲಾಗಿತ್ತು.. ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡೋದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು.. ಕೊಟ್ಟ ಮಾತಿನಂತೆ ನಡೆದುಕೊಳ್ಳದ ಸರ್ಕಾರದ ವಿರುದ್ಧ ಇಂದು ಸಾವಿರಾರು ಜನ ಪ್ರತಿಭಟನೆ ಮಾಡಿದ್ದಾರೆ