ಸಿದ್ಧಾಪುರ: ಆಡುಕಟ್ಟಾಕ್ಕೆ ಶಾಸಕ ಭೀಮಣ್ಣ ಭೇಟಿ, ಮರ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಧನ ವಿತರಣೆ
ಶಿರಸಿ : ಶಾಸಕ ಭೀಮಣ್ಣ ನಾಯ್ಕ ಬುಧವಾರ ಸಿದ್ದಾಪುರ ತಾಲೂಕಿನ ಆಡುಕಟ್ಟಾದಲ್ಲಿ ಕೆಲ ದಿನಗಳ ಹಿಂದೆ ಮಳೆಯಿಂದ ಕಾರಿನ ಮೇಲೆ ಮರ ಬಿದ್ದು ಮೃತಪಟ್ಟ ಹಲಗೇರಿಯ ದೇವರಾಜ ನಾಯ್ಕ ಮನೆಗೆ ಭೇಟಿ ನೀಡಿ ಪರಿಹಾರ ಧನ ವಿತರಿಸಿದರು. ಮೃತ ಪಟ್ಟ ವ್ಯಕ್ತಿಯ ಕುಟುಂಬದವರಿಗೆ ಸಾಂತ್ವನ ಹೇಳಿ ಸರ್ಕಾರದ 5 ಲಕ್ಷ ಪರಿಹಾರದ ಚೆಕ್, ತಾಯಿಗೆ ಮಾಶಾಸನ ಪತ್ರ ಹಾಗೂ ವಯಕ್ತಿಕ ಆರ್ಥಿಕ ಸಹಾಯ ನೀಡಿದರು. ನಂತರ ಮನಮನೆಯಲ್ಲಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಯುವಕ ಮೆಣಸಿಯ ದೇವರಾಜ ರಾಮಾ ನಾಯ್ಕ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ವಯಕ್ತಿಕ ನೆರವು ನೀಡಿ ಧೈರ್ಯ ತುಂಬಿದರು.