ಸಿಂದಗಿ: ಪಟ್ಟಣದಲ್ಲಿ ಮಲ್ಲಯ್ಯನ ಪಾದಗಟ್ಟಿಯಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರೀಶೈಲ ಪಾದಯಾತ್ರೆ ಕೈಗೊಂಡರು.
ಪಟ್ಟಣದ ಅರಣ್ಯ ಇಲಾಖೆ ಹತ್ತಿರವಿರುವ ಮಲ್ಲಯ್ಯನ ಪಾದಗಟ್ಟಿಯಿಂದ ಬುಧವಾರ ಬೆಳಿಗ್ಗೆ 11 ಗಂಟೆಗೆ ಮಲ್ಲಯ್ಯದೇವರೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಸಿಂದಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಭಕ್ತರು ಶ್ರೀಶೈಲ ಪಾದಯಾತ್ರೆ ಕೈಗೊಂಡರು. ಸಕಲವಾದ್ಯಗಳೊಂದಿಗೆ, ಕಂಬಿಯೊಂದಿಗೆ ಪಾದಯಾತ್ರೆ ಪ್ರಾರಂಭವಾಯಿತು. ಸ್ಥಳಿಯ ಶ್ರೀ ಮಲ್ಲಯ್ಯ ದೇವಸ್ಥಾನದ ಅರ್ಚಕರು ಹಾಗೂ ಭಕ್ತರು ಭಾಗವಹಿಸಿದ್ದರು.