ಜೇವರ್ಗಿ: ಪಟ್ಟಣದಲ್ಲಿ ಕಲ್ಕತ್ತಾ ದೇವಿ ಜಾತ್ರಾ ಮಹೋತ್ಸವಕ್ಕೆ ಉಳಿಬಾನ ತಯಾರಿಸಿದ ಮಹಿಳಾ ಭಕ್ತರು
ಜೇವರ್ಗಿ ಆರಾಧ್ಯ ದೇವತೆಯಾದ ಶ್ರೀ ಮಹಾಲಕ್ಷ್ಮಿ ಕಲ್ಕತ್ತಾ ದೇವಿ ಜಾತ್ರಾ ಮಹೋತ್ಸವದ ಹಿನ್ನಲೆ ಉಳಿಬಾನ ಕೈಚಕಳಿ ತಯಾರಿಸಿ ಪ್ರಸಾದ ಮಾಡಲಾಯಿತು. ಕನಕದಾಸ ಬಡಾವಣೆಯ ಮಾಳಿಂಗರಾಯರ ದೇವಸ್ಥಾನದ ಆವರಣದಲ್ಲಿ ಕಳೆದ ನಾಲ್ಕು ದಿನದಿಂದ ಜೋಳ ಕುಟ್ಟಿ ಉಳಿ ಬಾನ ತಯಾರಿಸುತ್ತಿದ್ದಾರೆ. ಸುಮಾರು 25 ಕ್ವಿಂಟಲ್ ಉಳಿಬಾನ ತಯಾರು ಮಾಡಿ ಬಂದ ಭಕ್ತಾದಿಗಳಿಗೆ ಪ್ರಸಾದ ಉಣಭಡಿಸಲಾಗುತ್ತಿದೆ. ಇದು ಪ್ರತಿ ವರ್ಷ ಕುರುಬ ಸಮಾಜದವರು ತಾಯಿಯ ಜಾತ್ರೆ ಪ್ರಯುಕ್ತ ಮಾಡುವ ಪದ್ಧತಿಯಾಗಿದೆ..ಈ ಕುರಿತು ಗುರುವಾರ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ.