ಹಳಿಯಾಳ : ಡಿಸೆಂಬರ್ 13 14 ಮತ್ತು 15 ರಂದು ದಾಂಡೇಲಿಯ ಹಳೆ ನಗರಸಭೆ ಮೈದಾನದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲೆಯ 25ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ, ಶಾಸಕರೂ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಆದ ಆರ್.ವಿ.ದೇಶಪಾಂಡೆಯವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಅವರು ಬುಧವಾರ ಸಂಜೆ 7:30 ಗಂಟೆ ಸುಮಾರಿಗೆ ಹಳಿಯಾಳದಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ನೀಡಿ ಸಮ್ಮೇಳನಕ್ಕೆ ಗೌರವದಿಂದ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಆರ್.ವಿ.ದೇಶಪಾಂಡೆಯವರು ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿ, ಸಿದ್ಧತೆಯ ಕುರಿತಂತೆ ಕೆಲ ಹೊತ್ತು ಬಿ.ಎನ್ ವಾಸರೆಯವರ ಜೊತೆ ಚರ್ಚೆ ನಡೆಸಿದರು.