ಚಾಮರಾಜನಗರ ಜಿಲ್ಲೆಯಲ್ಲಿ ವನ್ಯಜೀವಿ ಸಂಘರ್ಷ ಮುಂದುವರೆದಿದ್ದು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಚಿರತೆ ದಾಳಿಗೆ ಬಲಿಯಾದ ಘಟನೆ ಯಳಂದೂರು ತಾಲೂಕಿನ ಚಾಮಲಪುರದಲ್ಲಿ ಸೋಮವಾರ ನಡೆದಿದೆ. ಚಾಮಲಪುರ ಗ್ರಾಮದ ಸಿದ್ದಪ್ಪಸ್ವಾಮಿ ಹಸು ಕಳೆದುಕೊಂಡ ರೈತರಾಗಿದ್ದಾರೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಚಿರತೆ ದಾಳಿ ಮಾಡಿ ಕೊಂದು ಬಳಿಕ ಮಾಂಸ ತಿಂದು ಪರಾರಿಯಾಗಿದೆ. ಈ ಕುರಿತು ಗ್ರಾಮದ ಮುಖಂಡ ಮಹಾದೇವಸ್ವಾಮಿ ಮಾತನಾಡಿ, ಕಳೆದ ಹಲವು ತಿಂಗಳಿನಿಂದ ಚಿರತೆ ಉಪಟಳ ಕೊಡುತ್ತಿದ್ದು ಇಂದು ಹಸುವನ್ನು ಬಲಿ ಪಡೆದಿದೆ. ಜಮೀನಿಗೆ ತೆರಳಲು ರೈತರು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಅರಣ್ಯ ಇಲಾಖೆ ಹಸು ಕಳೆದುಕೊಂಡ ಸಿದ್ದಪ್ಪಗೆ ಸೂಕ್ತ ಪರಿಹಾರ ಕೊಡಬೇಕು ಹಾಗೂ ಚಿರತೆ ಸೆರೆಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.