ಬಾಗೇಪಳ್ಳಿ ತಾಲೂಕಿನ ಪಾತಪಾಳ್ಯ ಹೋಬಳಿಯ ಗುಡಿಪಳ್ಳಿ ಬಳಿ ಉತ್ತಮ ಮಳೆಯಿಂದಾಗಿ ಜಡಮಡಗು ಜಲಪಾತ ತುಂಬಿ ಹರಿಯುತ್ತಿದೆ. ಸುಮಾರು 30 ಅಡಿಗಳ ಎತ್ತರದಿಂದ ಧುಮುಕುತ್ತಿರುವ ನೀರಿನ ಧಾರೆ ಬಂಡೆಗಳ ಮೇಲಿಂದ ಜಾರುವ ದೃಶ್ಯ ಮನಸೆಳೆಯುತ್ತಿದೆ. ಸತತ ಬರದಿಂದ ಬಳಲುತ್ತಿದ್ದ ಈ ಭಾಗದಲ್ಲಿ ಈಗ ಪ್ರಕೃತಿಯ ಸೌಂದರ್ಯ ಹೊಸ ಉತ್ಸಾಹ ತಂದಿದೆ. ತಾಲೂಕು ಸೇರಿದಂತೆ ನೆರೆಯ ಆಂಧ್ರ ಪ್ರದೇಶ ಮತ್ತು ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಜಲಪಾತದ ಸೊಬಗನ್ನು ಕಾಣಲು ಹರಿದು ಬರುತ್ತಿದ್ದಾರೆ.