ಹಿರಿಯೂರು: ಹಿಂಡಸ್ ಕಟ್ಟೆ ಬಳಿ ನಡೆದ ಭೀಕರ ಅಪಘಾತ ಬದುಕಿ ಬಾಳಬೇಕಿದ್ದ ನಾಲ್ವರ ಯುವಕರ ದುರ್ಮರಣ: ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದ ಸಚಿವ ಸುಧಾಕರ್
ಹಿರಿಯೂರು:ಹಿರಿಯೂರು ತಾಲೂಕಿನ ಹಿಂಡಸ್ ಕಟ್ಟೆ ಸಮೀಪ ಕಳೆದ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ನಂಜಯ್ಯನಕೊಟ್ಟಿಗೆ ಗ್ರಾಮದ ವಿಶ್ವನಾಥ್ (22), ನಂಜುಂಡಿ (23), ರಾಹುಲ್ (23) ಮತ್ತು ಯಶವಂತ್ (22) ಎಂದು ಗುರುತಿಸಲಾಗಿದೆ. ಅತೀವ ದುಃಖಕರ ಘಟನೆ… ನಇಂಡಸಕಟ್ಟೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹಿರಿಯೂರು ನಗರದ ನಂಜಯ್ಯನ ಕೊಟ್ಟಿಗೆಯ ನಾಲ್ವರು ಯುವಕರು ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ.