ಮೈಸೂರು: ಯುವ ದಸರಾ ಪೂರ್ವ ಸಿದ್ದತೆ ವೇಳೆ ಕರ್ತವ್ಯನಿರತ ಹೋಂ ಗಾರ್ಡ್ ಹೃದಯಘಾತದಿಂದ ಸಾವು
Mysuru, Mysuru | Sep 21, 2025 ಕರ್ತವ್ಯನಿರತ ಹೋಮ್ ಗಾರ್ಡ್ ಹೃದಯಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೊರವಲಯದ ಉತ್ತನಹಳ್ಳಿ ಬಳಿ ನಡೆದಿದೆ. ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ನಡೆಯಲಿರುವ ಯುವ ದಸರಾ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ವೇಳೆ ನಂಜನಗೂಡು ಗೃಹರಕ್ಷಕ ದಳದ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮದ ಮಹದೇವಸ್ವಾಮಿ (32) ಸಾವನ್ನಪ್ಪಿದ್ದಾರೆ.