ಹುನಗುಂದ: ವಗಾ೯ವಣೆಗೊಂಡ ಹುನಗುಂದ ಡಿವಾಯ್ಎಸ್ಪಿ ಮತ್ತು ಸಿಪಿಐಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಹುನಗುಂದ ಡಿವಾಯ್ಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಹುನಗುಂದ ಸಿಪಿಐ ಸುನೀಲ ಸವದಿ ಅವರು ಬೇರೆಡೆಗೆ ವರ್ಗಾವಣೆಗೊಂಡ ಪ್ರಯುಕ್ತ ಬೀಳ್ಕೋಡುವ ಸಮಾರಂಭ ಹುನಗುಂದ ಪಟ್ಟಣದಲ್ಲಿ ಅ.೦೯ ರಾತ್ರಿ ೯ ಗಂಟೆಗೆ ನಡೆಯಿತು. ಈ ಸಮದಯದಲ್ಲಿ ಪೋಲಿಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಅವರ ಅಭಿಮಾನಿಗಳು ಡಿವಾಯ್ಎಸ್ಪಿ ಮತ್ತು ಸಿಪಿಐ ಅವರ ಮೇಲೆ ಹೂ ಮಳೆಯನ್ನು ಸುರಿಸುವ ಮೂಲಕ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು.