ಗಾಂಜಾ ಮಾರಾಟ, ಓರ್ವ ಆರೋಪಿ ಸೆರೆ, ಮಾಲು ವಶಕ್ಕೆ ಪಡೆದ ಉರಿಗಾಂ ಪೊಲೀಸರು ಕೆಜಿಎಫ್ ಪೊಲೀಸ್ ಜಿಲ್ಲೆಯ ಉರಿಗಾಂ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ರೂ.೧,೦೦,೦೦೦/- ಮೌಲ್ಯದ ೧ ಕೆ.ಜಿ ೧೬೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಡಿ. ೧೨ ರಂದು ಉರಿಗಾಂ ಪೊಲೀಸ್ ಠಾಣೆ ವ್ಯಾಪ್ತಿಯ ಎಲೆಕ್ಟ್ರಿಕ್ ಲೈನ್ ಕಡೆಯಿಂದ ಎಸ್.ಟಿ ಬ್ಲಾಕ್ ಕಡೆ ಹೋಗುವ ರಸ್ತೆಯ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದಂತಹ ಖಚಿತ ಮಾಹಿತಿಯನ್ನು ಆಧರಿಸಿ, ಉರಿಗಾಂ ಪೊಲೀಸ್ ಠಾಣೆಯ ಪಿ.ಎಸ್.ಐ ಕೃರ್ಷ್ಣಮೂರ್ತಿ ಎಲ್.ಎಂ. ಮತ್ತು ಸಿಬ್ಬಂದಿಗಳು ಕೂಡಲೆ ದ