ಯಲ್ಲಾಪುರ: ತಾಲೂಕಿನ ಚಂದಗುಳಿ ಯ ಮಳಲಗಾಂವ ಬಳಿ ಹುಲಿ ದಾಳಿಯಿಂದ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಮಾಗೋಡಿನ ಬಕ್ಕಳತಗ್ಗಿನ ಗಣೇಶ ಸಿದ್ದಿ ಹಾಗೂ ದೇಸಾಯಿಮನೆಯ ಧನಂಜಯ ಸಿದ್ದಿ ಎಂಬವರು ಬೈಕ್ ಮೇಲೆ ಚಂದಗುಳಿ ಮಾರ್ಗದಲ್ಲಿ ಬರುತ್ತಿರುವಾಗ, ಮರಿಗಳೊಂದಿಗೆ ಬರುತ್ತಿದ್ದ ಹುಲಿಯೊಂದು ಏಕಾಏಕಿ ಇವರ ಮೇಲೆ ಎರಗಿದೆ. ಇದರಿಂದ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಧನಂಜಯ್ ಅವರ ಕಾಲಿಗೆ ಹುಲಿಯ ಉಗುರು ತಾಗಿ ಪರಚಿದ ಗಾಯಗಳಾಗಿವೆ ಹುಲಿ ಎರಗಿದದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಹುಲಿಯ ಕೂದಲು ಬೈಕಿಗೆ ಸಿಕ್ಕಿ ಕೊಂಡಿದ್ದು ಕಂಡು ಬಂದಿದೆ. ಬೈಕ್ ಬೀಳುತ್ತಿದ್ದಂತೆ ಹುಲಿ ಮರಿಗಳೊಂದಿಗೆ ಅಲ್ಲಿಂದ ಹೋಗಿದ್ದು ಅದೃಷ್ಟ ವಶಾತ್ ಪ್ರಾಣಾಪ