ಶಿರಸಿ: ಶಿರಸಿ ಹಾವೇರಿ ರಸ್ತೆ ರಿಪೇರಿ ಮಾಡದ ಗುತ್ತಿಗೆ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲುಶಿರಸಿ ಡಿಎಸ್ಪಿ ಕಚೇರಿಯಲ್ಲಿ ಸಾರ್ವಜನಿಕರಿಂದ ಎಸ್ಪಿಗೆ ಮನವಿ
ಶಿರಸಿ : ಶಿರಸಿ- ಹಾವೇರಿ ರಾಷ್ಟ್ರೀಯ ಹೆದ್ದಾರಿ ಸಾಗರ ಮಾಲಾ ಯೋಜನೆಯಲ್ಲಿ ರಸ್ತೆ ರಿಪೇರಿ ಮಾಡದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಅಮ್ಮಾಪುರ ಕನ್ಸ್ಟ್ರಕ್ಷನ್ ಕಂಪನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದ ನಿಯೋಗ ಶಿರಸಿಯ ಡಿಎಸ್ಪಿ ಕಚೇರಿಗೆ ಆಗಮಿಸಿ ಶನಿವಾರ ಎಸ್ಪಿಗೆ ಮನವಿ ನೀಡಲಾಯಿತು.