ಚಿತ್ರದುರ್ಗ: ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಕಾಣೆ; ಠಾಣೆಯಿಂದ ಪ್ರಕಟಣೆ
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಗಳು ಕಾಣೆಯಾದ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಸೋಮವಾರ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಗರದ ಬಿ.ಡಿ.ರಸ್ತೆ ಭೋವಿ ಕಾಲೋನಿಯ ಪುನೀತ್ ತಂದೆ ಲೇಟ್ ರಮೇಶ್(21) 25 ಫೆಬ್ರವರಿ 2024 ರಂದು ಕಾಣೆಯಾಗಿರುತ್ತಾನೆ. ಪುನಿತ್ 6 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು ತಲೆಯ ಬಾಲ ಭಾಗದಲ್ಲಿ ಹಳೆಯ ಗಾಯದ ಗುರುತಿದೆ. ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾನೆ. ನಗರದ ರಾಜೀವ್ ಗಾಂಧಿ ಆಶ್ರಯ ಬಡಾವಣೆ 2ನೇ ಹಂತದ ನಿವಾಸಿ ಬಸವರಾಜ ತಂದೆ ತಿಪ್ಪೇಸ್ವಾಮಿ(36) 27 ಸೆಪ್ಟಂಬರ್ 2024 ರಂದು ಕಾಣೆಯಾಗಿರುತ್ತಾನೆ.