ಶಿವಮೊಗ್ಗ: ಚಿನ್ನಯ್ಯನ ಉಸ್ತುವಾರಿ ಹೊತ್ತಿದ್ದ ಅಧಿಕಾರಿಯಿಂದ ಕರ್ತವ್ಯ ಲೋಪ, ಶಿವಮೊಗ್ಗ ತುಂಗಾ ನಗರ ಪೊಲೀಸರಿಂದ ಅಧಿಕಾರಿ ಬಂಧನ
ಧರ್ಮಸ್ಥಳದ ಬುರುಡೆ ಗ್ಯಾಂಗ್ ನ ಚಿನ್ನಯ್ಯನ ಉಸ್ತುವಾರಿ ಹೊತ್ತಿದ್ದ ಅಧಿಕಾರಿಯೇ ಕರ್ತವ್ಯ ಲೋಪ ಎಸಗಿದ್ದಾರೆ. ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ವೀಕ್ಷಕನಿಂದಲೇ ಕರ್ತವ್ಯ ಲೋಪ ಎಸಗಿರುವ ಗಂಭೀರ ಆರೋಪ ಕೇಳಿಬಂದಿದ್ದು ಅಧಿಕಾರಿಯನ್ನ ಪೊಲೀಸರು ಬಂಧಿಸಿದ್ದಾರೆ. ಚಿನ್ನಯ್ಯನ ಉಸ್ತುವಾರಿ ಹೊತ್ತಿದ್ದ ಮುಖ್ಯ ವೀಕ್ಷಕ ಶಿವಮೂರ್ತಿ ಬಸವರಾಜ ಕಂಕಣವಾಡಿ ಎಂಬುವರು ಕರ್ತವ್ಯ ಲೋಪ ಎಸಗಿದ್ದಾರೆ. ಕರ್ತವ್ಯ ಲೋಪ ಎಸಗಿದ ಮುಖ್ಯ ವೀಕ್ಷಕನ ವಿರುದ್ಧ ತುಂಗಾನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಜೈಲಿನಲ್ಲಿರುವ ಶಿಕ್ಷಾ ಬಂಧಿಗೆ ಜೈಲಿನ ಮುಖ್ಯವೀಕ್ಷಕ ಶಿವಮೂರ್ತಿ ಬಸವರಾಜ್ ಕಂಕಣವಾಡಿ ಮೊಬೈಲ್ ನೀಡಿದ್ದಾರೆ.