ಚಿತ್ರದುರ್ಗದ ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಸಲಾಯ್ತು. 30 ನೇ ವರ್ಷದ, ಮೊದಲ ತಿಂಗಳ ಕಲ್ಯಾಣ ಮಹೋತ್ಸವ ಇದಾಗಿತ್ತು. ಸಾಮೂಹಿಕ ವಿವಾಹದಲ್ಲಿ ಸಾಂಸಾರಿಕ ಜೀವನಕ್ಕೆ 5 ಜೋಡಿಗಳು ಕಾಲಿಟ್ಟರು. ಮುರುಘಾ ಮಠ ಸತತ 30 ವರ್ಷಗಳಿಂದ ಸಾಮೂಹಿಕ ಕಲ್ಯಾಣೋತ್ಸವ ನಡೆಸಿಕೊಂಡು ಬರುತ್ತಿದೆ.ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಕಳಸದ್ ಅಧ್ಯಕ್ಷತೆ ವಹಿಸಿದ್ದರು. ನೂತನ ವಧು-ವರರನ್ನ ಬಸವಪ್ರಭು ಸ್ವಾಮಿಜಿ ಆಶಿರ್ವದಿಸಿದರು.