ರಾಮನಗರ: ಆಂಗ್ಲರ ಎದೆಯಲ್ಲಿ ಬೆಂಕಿಮಳೆ ಸುರಿಸಿದ ಕ್ರಾಂತಿಕಾರಿ ಭಗತ್ ಸಿಂಗ್, ನಗರದಲ್ಲಿ ಭಗತ್ ಸಿಂಗ್ ಜಯಂತಿ ಆಚರಣೆ.
ರಾಮನಗರ-- ನಗರದ ಕಾಮನಗುಡಿ ವೃತ್ತದಲ್ಲಿ ಭಾನುವಾರ ಮಧ್ಯಾಹ್ನ 4:30 ರಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನಾಚರಣೆಯನ್ನು ಕಾಮಗುಡಿ ಸರ್ಕಲ್ ಗೆಳೆಯರ ಬಳಗದ ಸದಸ್ಯರು ಭಗತ್ ಸಿಂಗ್ ರವರ ಬಾವಚಿತ್ರ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿದರು. ಭರತಮಾತೆಯ ವೀರಪುತ್ರ ಸರ್ದಾರ್ ಭಗತ್ ಸಿಂಗ್ ಕೆಚ್ಚು, ಕ್ರಾಂತಿ, ಬಲಿದಾನದ ಪ್ರತೀಕ. ಸ್ವಾತಂತ್ರ್ಯ ಸಂಗ್ರಾಮದ ಅಮರ ವೀರನ ಹೋರಾಟ ಆಂಗ್ಲರ ಎದೆಯಲ್ಲಿ ಬೆಂಕಿಮಳೆ ಸುರಿಸಿದ ಕ್ರಾಂತಿಕಾರಿ, ಜನ್ಮಭೂಮಿಗಾಗಿ ಪ್ರಾಣಾರ್ಪಣೆಯನ್ನೇ ಮಾಡಿದ ಮಹಾನ್ ಸೇನಾನಿ ಭಗತ್ ಸಿಂಗ್ ಅವರ ಬದುಕ ಯುವ ಪೀಳಿಗೆ ಅದರ್ಶವೆಂದು ಭಗತ್ ಸಿಂಗ್ ಅವರ ಹೋರಾಟವನ್ನ ಸ್ಮರಿಸಿಕೊಂಡರು.