ಶಿರಸಿ: ಮಳೆಯಿಂದ ಗೋಸಾವಿ ಗಲ್ಲಿ ಸೇರಿದಂತೆ ವಿವಿಧೆಡೆ ಮನೆಗಳಿಗೆ ಹಾನಿ
ಶಿರಸಿ : ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಶಿರಸಿ ತಾಲೂಕಿನ ವ್ಯಾಪ್ತಿಯಲ್ಲೂ ಕಳೆದ ಎರಡು ಮೂರು ದಿನದಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದಾಗಿ ವಿವಿಧೆಡೆ ಅಪಾರ ಹಾನಿಯುಂಟಾಗಿದೆ. ಗಣೇಶನಗರದ ಗೋಸಾವಿಗಲ್ಲಿಯ ಶಂಕರ ಶಿವಾಜಿ ಗೋಸಾವಿಯವರ ಮನೆಯ ಮೇಲ್ಛಾವಣಿ ಮುರಿದು ಬಿದ್ದು ೧೦ ಸಾವಿರ ರೂ., ತಾಲೂಕಿನ ಸೊಣಗಿನಮನೆ ಗ್ರಾಮದ ಗದ್ದೆಹಳ್ಳಿಯ ಸುಬ್ರಹ್ಮಣ್ಯ ನಾಗು ಗೌಡ ವಾಸ್ತವ್ಯದ ಮನೆಯ ಪಡಿ ಮಾಡಿನ ಮೇಲೆ ಮರ ಬಿದ್ದು ೨೦ ಸಾವಿರ ರೂ. ಹಾನಿ ಸಂಭವಿಸಿದೆ. ಘಟನಾ ಕಂದಾಯ ಇಲಾಖೆ ಅಽಕಾರಿಗಳು ಸ್ಥಳಕ್ಕೆ ತೆರಳಿ, ಹಾನಿಯನ್ನು ಪರಿಶೀಲಿಸಿದ್ದಾರೆ.