-ಯಲ್ಲಾಪುರ : ಪಟ್ಟಣದ ನಾಯಕನಕೆರೆ ತಟದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ದತ್ತಮಂದಿರದಲ್ಲಿ ಗುರುವಾರ ದತ್ತ ಜಯಂತಿ ಮಹೋತ್ಸವ ವಿಜೃಂಭಣೆ ಯಿಂದ ನಡೆಯಿತು. ದೇವಸ್ಥಾನದ ಅಧ್ಯಕ್ಷ ವಿ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ನೇತ್ರತ್ವದಲ್ಲಿ ವಿ.ವೆಂಕಟ್ರಮಣ ಭಟ್ಟ ಮಾಗೋಡು ಹಾಗೂ ವಿ. ವಿದ್ಯಾಧರ ಭಟ್ಟ ಇವರ ಪ್ರಧಾನ ಆಚಾರತ್ವದಲ್ಲಿ 10 ವೈದಿಕರಿಂದ ವಿವಿದ ಧಾರ್ಮಿಕ ಕಾರ್ಯಗಳು ಜರುಗಿದವು.ದತ್ತ ಮೂಲಮಂತ್ರ ಹವನ, ತೊಟ್ಟಿಲ ಪೂಜೆ, ಕ್ಷೀರಾಭಿಷೇಕ, ಭಸ್ಮಾರ್ಚನೆ. ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಗಳು ಜರುಗಿದವು. ನಂತರ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರರು ಜನರು ಅನ್ನ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.